ಎಂ. ಕೃಷ್ಣಪ್ಪ ಇವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿ. == ವೈಯಕ್ತಿಕ ಜೀವನ == ಇವರು ದಿವಂಗತ ಮುನಿಸ್ವಾಮಪ್ಪ ಅವರ ಪುತ್ರ. ಇವರು ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ಅವರ ಪತ್ನಿ ಕೈಗಾರಿಕೋದ್ಯಮಿ. ಇವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರಾಗಿದ್ದಾರೆ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಮತ್ತು ಹುಲಿಯನ್ನು ದತ್ತು ಪಡೆದರು. == ವೃತ್ತಿ == ಕೃಷ್ಣಪ್ಪ ೧೯೮೩ರಲ್ಲಿ ಸಹೋದರನ ರಾಜಕೀಯ ಪ್ರಚಾರಕ್ಕೆ ಸಹಾಯ ಮಾಡುವ ಮೂಲಕ ಇವರು ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ೨೦೦೫ರ ಜಿಲ್ಲಾ ಪಂಚಾಯತ್ ಚುನಾವಣೆಯ ಒಂದು ವರ್ಷದ ಅವಧಿಗೆ ಉತ್ತರಹಳ್ಳಿಯಿಂದ ಮೊದಲ ಬಾರಿಗೆ ಆಯ್ಕೆಯಾದರು. ಈ ಅವಧಿಯಲ್ಲಿ ಅವರು ಉತ್ತರಹಳ್ಳಿಯ ಸರ್ಕಾರಿ ಶಾಲಾ ಸುಧಾರಣಾ ಸಮಿತಿಯ ಕೌನ್ಸೆಲಿಂಗ್ ಸದಸ್ಯರಾದರು. ೨೦೧೧ರಲ್ಲಿ ಅವರು ಬಿಎಂಟಿಸಿಯ ಉಪಾಧ್ಯಕ್ಷರಾದರು. ೨೦೦೮ ರಲ್ಲಿ ಅವರು ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು ನಂತರ, ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದರು. == ವಿವಾದಗಳು == ೯ ಡಿಸೆಂಬರ್ ೨೦೧೪ ರಂದು ಲೋಕಾಯುಕ್ತ ನ್ಯಾಯಮೂರ್ತಿ ವೈ ಭಾಸ್ಕರ್ ರಾವ್ ಅವರು ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅವರ ವಿರುದ್ಧ ಆರೋಪ ಹಾಕಿದರು ಮತ್ತು ಅವರ ಹುದ್ದೆಯನ್ನು ಮುಂದುವರಿಸಬಾರದು ಎಂದು ಘೋಷಿಸಿದರು. == ಉಲ್ಲೇಖಗಳು ==